NALI-KALI

NALI-KALI
"I like to teach Nali-Kali classes"

Monday, August 23, 2010

ನಲಿ-ಕಲಿ - 'ಭಾಷೆ'

ನಲಿ-ಕಲಿ 1 ಮತ್ತು 2 ನೇ ಏಣಿಯ 'ಭಾಷೆ'ಯಲ್ಲಾದ ಬದಲಾವಣೆಗಳು!


ಆತ್ಮೀಯ ನಲಿ-ಕಲಿ ಶಿಕ್ಷಕರೆ.....

ಈ ಲೇಖನ ತಮ್ಮನ್ನು ತಲುಪುವಷ್ಟರಲ್ಲಿ ತಮಗೆಲ್ಲರಿಗೂ ನಲಿ-ಕಲಿಯ 3 ದಿನಗಳ ತರಬೇತಿ (1 ಮತ್ತು 2 ನೇ ಏಣಿಗಳ ಪರಷ್ಕರಣೆ ಮತ್ತು 3 ನೇ ಏಣಿಗೆ ಸಂಬಂಧಿಸಿದಂತೆ) ಆಗಿರುತ್ತದೆ. ಈ ಮೊದಲು ನಿಮ್ಮಲ್ಲಿ ಸಾಕಷ್ಟು ಗೊಂದಲಗಳು, ಸಮಸ್ಯೆಗಳಿದ್ದವು ಅವುಗಳನ್ನು ಸಂಪನ್ಮೂಲ ವ್ಯಕ್ತಿಗಳು ಸಂಪೂರ್ಣವಾಗಿ ಬಗೆಹರಿಸಿದ್ದಾರೆ ಎಂದುಕೊಂಡಿದ್ದೇನೆ. ಒಂದು ವೇಳೆ ಸಮಸ್ಯೆಗಳೇನಾದರು ಇದ್ದರೆ ಸೂಕ್ತ ವ್ಯಕ್ತಿಗಳನ್ನು ಸಂಪಕರ್ಿಸಿ, ಅವುಗಳನ್ನು ಬಗೆಹರಿಸಿಕೊಂಡು ವರ್ಗ ಕೋಣೆಯಲ್ಲಿ ಯಾವುದೇ ರೀತಿಯ ಗೊಂದಲಗಳಿರದಂತೆ ಪ್ರವೇಶಿಸೋಣ.

'ನಲಿ-ಕಲಿ' ಕಲಿಕಾ ವಿಧಾನದ ಸಮಸ್ಯೆ ಮತ್ತು ಸವಾಲುಗಳು!

ತಮಗೆಲ್ಲ ತಿಳಿದಿರುವಂತೆ ನಾವು ಈ ವರ್ಷ ಒಂದು, ಎರಡು ಮತ್ತು ಮೂರನೇ ತರಗತಿಗಳನ್ನು ಒಟ್ಟಿಗೆ ಸೇರಿಸಿ ಕಲಿಸಬೇಕಾಗಿದೆ. ಈ ಕುರಿತು ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದವು, ಪ್ರತ್ಯೇಕವಾಗಿ ಕಲಿಸಲು ಅವಕಾಶ ಮಾಡಿಕೊಡಬೇಕೆಂಬ ಕೂಗುಗಳಿದ್ದವು. ಆದರೆ ನಲಿ-ಕಲಿ ಎಂದರೆ ಕೇವಲ ಬಹುಹಂತದ ಕಲಿಕೆಯಾಗದೇ ಬಹುವರ್ಗದ ಬೋಧನೆಯು ಆಗಿದೆ ಎಂಬುದನ್ನು ನಾವು ಮರೆಯುವಂತಿಲ್ಲ. ಮೂರು ವರ್ಗಗಳನ್ನು ಕೂಡಿಸಿ ಕಲಿಸಬೇಕೆಂದು ಹೇಳಲು ಪ್ರಮುಖ ಕಾರಣಗಳಿವೆ. ಅವುಗಳನ್ನು ನಾವು ಈ ರೀತಿ ಗುರುತಿಸಬಹುದು.

1) ಬಹುವರ್ಗ ಬೋಧನೆಯೇ ನಲಿ-ಕಲಿ ಮಂತ್ರವಾಗಿರುವುದರಿಂದ.

2) ಕಲಿಕೆಯಲ್ಲಿ ಹಿಂದುಳಿದ ಮಕ್ಕಳಲ್ಲಿ ಕೀಳರಿಮೆ ಬೆಳೆಯದಂತೆ ನೋಡಿಕೊಳ್ಳುವುದರೊಂದಿಗೆ ಸಂತಸ ಕಲಿಕೆಗೆ ಅವಕಾಶ ಕಲ್ಪಿಸಲು.

3) ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಲಿಕಾ ಕೊರತೆಯನ್ನು ತುಂಬಿ ಮುಂದಿನ ತರಗತಿಯ ಕಲಿಕೆಯಲ್ಲಿ ತೊಡಗಿಸಲು.

4) ಗೆಳೆಯನ ಸಹಾಯವನ್ನು ಸಮರ್ಥವಾಗಿ ಪಡೆದುಕೊಳ್ಳಲು.

5) ಶಿಕ್ಷಕರ ಹೊರೆಯನ್ನು ಕಡಿಮೆ ಮಾಡಲು.

ನಲಿ-ಕಲಿಯನ್ನು ಈ ವರ್ಷ ಅನುಷ್ಠಾನದ ಹಂತದಲ್ಲಿ ತರುವಲ್ಲಿ ಸ್ವಲ್ಪ ತಡವಾಗಿದೆ. ಅದಕ್ಕೆ ಆಡಳಿತಾತ್ಮಕ ತೊಂದರೆಗಳಿರಬಹುದು. ಅವುಗಳು ಏನೇ ಇರಲಿ ನಾವು ಇನ್ನಾದರೂ ಸಮಯವನ್ನು ಹಾಳು ಮಾಡದಂತೆ ಸಿಕ್ಕ ಸಮಯವನ್ನು ಸಮರ್ಥವಾಗಿ ಬಳಸಿಕೊಂಡು ನಲಿ-ಕಲಿ ಕಲಿಕಾ ವಿಧಾನವನ್ನು ನಮ್ಮ ನಮ್ಮ ಶಾಲೆಗಳಲ್ಲಿ ಯಶಸ್ವಿಗೊಳಿಸಲು ಶ್ರಮಿಸಬೇಕಾಗಿದೆ.

ಒಂದು ಮತ್ತು ಎರಡರ 'ಭಾಷಾ' ವಿಷಯದಲ್ಲಾದ ಬದಲಾವಣೆಗಳು.

ಕಳೆದ ವರ್ಷ ಪೂರೈಸಿದ ಭಾಷಾ ಕಾಡರ್ುಗಳನ್ನೆ ಈ ವರ್ಷ ಸೆಪ್ಟೆಂಬರ್ ವರೆಗೆ ಬಳಸಬೇಕಾಗಿದೆ. ಹಾಗೆ ನೋಡಿದರೆ 1 ಮತ್ತು 2 ನೇ ಏಣಿಯ ಭಾಷಾ ಕಾಡರ್ುಗಳಲ್ಲಿ ಅಮುಲಾಗ್ರ ಬದಲಾವಣೆಯನ್ನು ಮಾಡಿಲ್ಲ. ಭಾಷೆಯಲ್ಲಿ ಕೇವಲ ಮೆಟ್ಟಿಲು ಸಂಖ್ಯೆಯನ್ನು ಮಾತ್ರ ಕಡಿಮೆ ಮಾಡಲು ಪರಿಷ್ಕರಿಸಿದಂತಿದೆ. ಒಂದೆರಡು ಹೊಸ ಚಟುವಟಿಕೆಗಳನ್ನು ಸೇರಿಸಿದ್ದನ್ನು ಬಿಟ್ಟರೆ ಉಳಿದದ್ದು ಒಂದರೊಲ್ಲೊಂದು ತುರುಕುವ ಕಾರ್ಯವೇ ಆಗಿದೆ. ಆ ಮೂಲಕ ಶಿಕ್ಷಕರ ಮನಸ್ಸಿನಲ್ಲಿದ ಸಂಖ್ಯಾ ಭಯವನ್ನು ಸ್ವಲ್ಪ ಮಟ್ಟಿಗೆ ಈ ಪರಿಷ್ಕರಣೆ ಹೋಗಲಾಡಿಸಿದೆ ಎಂದೆನ್ನಬಹುದು. ಏನೇ ಇದ್ದರು ಪರಿಷ್ಕರಣೆಯಲ್ಲಾದ ಪರಿವರ್ತನೆಗಳನ್ನು ತಿಳಿಯುವುದು ಅವಶ್ಯಕ ಮತ್ತು ಅನಿವಾರ್ಯ ಕೂಡ. ಆದ್ದರಿಂದ ಬದಲಾವಣೆಗಳು ಈ ಮುಂದಿನಂತಿವೆ ಎಂಬುದನ್ನು ಶಿಕ್ಷಕರು ಗಮನಿಸಬೇಕಾಗಿದೆ.

1) ಈ ಹಿಂದೆ ಇದ್ದ 'ರಬ್ಬರ ಅಕ್ಷರ' ಚಟುವಟಿಕೆಯನ್ನು 'ಅಕ್ಷರ ಬರವಣಿಗೆ'( ಲೋಗೋ: ಲೇ.ಹಿ.ಬ.ಕೈ) ಕಾಡರ್ಿನೊಂದಿಗೆ ಸೇರಿಸಲಾಗಿದೆ. ಹಾಗೂ ಎರಡು ಚಟುವಟಿಕೆ ಒಟ್ಟಿಗೆ ನಡೆಯಬೇಕಾಗಿದೆ.

2) 'ಸಾಧನಕ್ಕೆ ತಕ್ಕ ಹಾಡು'( ಪುಟ್ಟ ಮಗು) ಚಟುವಟಿಕೆಯನ್ನು ಕೈ ಬಿಡಲಾಗಿದೆ.

3) 'ಚಿತ್ರ ಸಹಿತ ಪದ'(ನಾಯಿ) ಶೀಷರ್ಿಕೆ ಬದಲಾಯಿಸಿ 'ಚಿತ್ರವನ್ನು ಹೆಸರಿಸು' ಎಂದು ಹೆಸರಿಸಿದೆ. ಜೊತೆಗೆ ಚಿತ್ರವನ್ನು ಮಾತ್ರ ನೀಡಿದ್ದು ಪದ ನೀಡಲಾಗಿಲ್ಲ. ಇದು ಪೂರ್ವ ಸಿದ್ಧತಾ ಚಟುವಟಿಕೆಯಾಗಿದೆ.

4) 'ಜಾರು ಪಟ್ಟಿ' (ಜೋ.ಆ.ಮಗು) ಚಟುವಟಿಕೆಯನ್ನು ಗುಂಪು ತಟ್ಟೆ 2 ರಲ್ಲಿ ಅಂದರೆ ಕಲಿಕಾಂಶದಲ್ಲಿ ಬಳಸಲಾಗಿದೆ. ಈ ಹಿಂದೆ ಇದು ಕಲಿಕಾ ಪೂರಕ ಚಟುವಟಿಕೆಯಲ್ಲಿತ್ತು.

5) 'ಚಟುವಟಿಕೆ/ಆಟ' (ಡಬ್ಬದ ಮೇಲೆ ಮಂಗ) ಚಟುವಟಿಕೆಯನ್ನು ಬಳಕೆ ಹಂತದಿಂದ ಕಲಿಕಾ ಪೂರಕ ಹಂತಕ್ಕೆ ತರಲಾಗಿದ್ದು ಸಾಮೂಹಿಕವಾಗಿ ಬಳಸಬೇಕಿದೆ.

6) 'ಆಶಾ ಆಟ/ ಪದಶಬ್ದ ಆಟ' ದ ಐದು ಕಾಡರ್ುಗಳಿಗೆ ಪ್ರತ್ಯೇಕ ಮೆಟ್ಟಿಲು ಸಂಖ್ಯೆಯನ್ನು ನೀಡದೆ ಒಂದೇ ಮೆಟ್ಟಿಲು ಸಂಖ್ಯೆ ನೀಡಲಾಗಿದೆ.

7) 'ಅಭ್ಯಾಸದ ಹಾಳೆಗಳು' ಎನ್ನುವ ಬದಲು 'ಅಭ್ಯಾಸ ಪುಸ್ತಕ' ಎಂದು ಹೇಳಬೇಕು.

8) ಸ್ವರ ಚಿಹ್ನೆ ಪರಿಚಯ ಮತ್ತು ಸ್ವರ ಚಿಹ್ನೆ ಹಚ್ಚುವುದು (ಮೀನು) ಎಂಬ ಎರಡು ಕಾಡರ್ುಗಳನ್ನು ಸೇರಿಸಿ ಸ್ವರ ಚಿಹ್ನೆ ಪರಿಚಯ ಎಂದು ಒಂದೇ ಇಡಲಾಗಿದೆ ಮತ್ತು ಮೀನು ಲೋಗೋ ಮುಂದುವರಿಸಿದೆ.

9) ಗುಣಿತಾಕ್ಷಿ ಲೋಗೊವನ್ನು ಗುಣಿತಾಕ್ಷರಗಳ ರೇಖಾಭ್ಯಾಸಕ್ಕೆ ಕಲಿಕಾ ಪೂರಕ ಚಟುವಟಿಕೆಯಲ್ಲಿ ಇಡಲಾಗಿದೆ. ಈ ಹಿಂದೆ ಈ ಲೋಗೊವನ್ನು ಸ್ವರ ಚಿಹ್ನೆ ಹಚ್ಚುವುದಕ್ಕೆ ನೀಡಲಾಗಿತ್ತು.

10) ಖಾಲಿ ಹಾಳೆ/ಸಿ.ಪಿ.ಎಫ್(ಪಂಚಿಂಗ್ ಮಷಿನ್) ಗಳನ್ನು ಕೈಬಿಡಲಾಗಿದೆ. ಆದರೆ ಚಟುವಟಿಕೆಯನ್ನು ನೋಟು ಪುಸ್ತಕದಲ್ಲಿ ಸೂಚನೆಗಳ ಅನುಸಾರ ಮಾಡಬೇಕಿದೆ.

11) ಕಲಿಕಾ ಏಣಿ ನೀಡಲಾಗುವುದಿಲ್ಲ. ಪ್ರಗತಿ ನೋಟಗಳಿರುವುದರಿಂದ ಏಣಿಯ ಅವಶ್ಯಕತೆ ಇಲ್ಲವೆಂದು ಕೈಬಿಡಲಾಗಿದೆ.

12) ಕಾಡರ್ುಗಳು ಹಾಗೂ ಅಭ್ಯಾಸ ಪುಸ್ತಕಗಳು ಈ ಬಾರಿ ವರ್ಣರಂಜಿತವಾದ ಚಿತ್ರಗಳಿಂದ ಕೂಡಿವೆ. ಮೂರು ವರ್ಗಗಳ ಕಾಡರ್ುಗಳು ಸೆಪ್ಟೆಂಬರ ಅಂತ್ಯದವರೆಗೆ ವರ್ಣರಂಜಿತವಾಗಿ ಬರುತ್ತವೆ ಎಂಬ ಭರವಸೆಯನ್ನು ನೀಡಿದ್ದಾರೆ.

13) ಪ್ರಗತಿ ನೋಟಗಳನ್ನು ಸೆಪ್ಟೆಂಬರ್ ವರೆಗೆ ನೀಡಲಾಗುವುದಿಲ್ಲ. ಅದನ್ನು ಶಿಕ್ಷಕರೇ ಸಿದ್ಧಪಡಿಸಿಕೊಳ್ಳಬೇಕಿದೆ.

14) ಕಾಡರ್ುಗಳ ಬಣ್ಣಗಳು ಈ ರೀತಿ ಇರುತ್ತವೆ. 1 ನೇ ಏಣಿ - ಕೆಂಪು, 2 ನೇ ಏಣಿ - ಹಸಿರು, 3 ನೇ ಏಣಿ - ನೀಲಿ

15) ಪರಿಷ್ಕೃತ ಮೈಲಿಗಲ್ಲು, ಮಟ್ಟಿಲುಗಳು ಮತ್ತು ಚಟುವಟಿಕೆಗಳ ಸಂಖ್ಯಾ ವಿವರ ವರ್ಗವಾರು ಈ ಕೆಳಗಿನಂತಿದೆ.

ಕ್ರ.ಸಂ.  ತರಗತಿ  ಮೈಲಿಗಲ್ಲುಗಳು  ಮೆಟ್ಟಿಲುಗಳು  ಚಟುವಟಿಕೆಗಳು

1               1         17                  350                  27

2               2         18                  295                  20

3               3         11                  265                  15

ಇದಿಷ್ಟು ಒಂದು ಮತ್ತು ಎರಡನೇ ಏಣಿಗಳಲ್ಲಾದ ಬದಲಾವಣೆಗಳು. ಶಿಕ್ಷಕರು ತರಬೇತಿಯಲ್ಲಿ ನೀಡುವ ಕಲಿಕಾ ಏಣಿಗಳ ಆಧಾರದ ಮೇಲೆ ಕಾಡರ್ುಗಳನ್ನು ವ್ಯವಸ್ಥಿತವಾಗಿ ಹೊಂದಿಸಿಕೊಳ್ಳಬೇಕು. ಜೊತೆಗೆ ಪರಿಷ್ಕೃತ ಭಾಷಾ ತಟ್ಟೆಗಳನ್ನು ಪಡೆದುಕೊಂಡ ವರ್ಗ ಕೋಣೆಯಲ್ಲಿ ಬಳಸಬೇಕಿದೆ. ಮೂರನೇ ತರಗತಿಗೆ ಸಂಬಂಧಿಸಿಂದಂತೆ ಎಲ್ಲವೂ ಹೊಸದಾಗಿದ್ದು. ಕಾಡರ್ು, ಏಣಿ, ಪ್ರಗತಿ ನೋಟ, ಅಭ್ಯಾಸ ಪುಸ್ತಕ, ವಾಚಕಗಳನ್ನು ಜರಾಕ್ಸ್ ಮಾಡಿಸಿಕೊಂಡು ಸೆಪ್ಟೆಂಬರ ವರೆಗೆ ಬಳಸಬೇಕಾಗಿದೆ. ಈ ಕುರಿತು ತಮಗೆ ತರಬೇತಿಯಲ್ಲಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ತಮ್ಮಲ್ಲಿ ಯಾವುದೇ ಗೊಂದಲಗಳಿದ್ದರೆ ತಮ್ಮ ತಾಲೂಕಿನ ಸಂಪನ್ಮೂಲ ವ್ಯಕ್ತಿಗಳನ್ನು ಸಂಪಕರ್ಿಸಿ ಪರಿಹರಿಸಿಕೊಳ್ಳಿರಿ, ಸಾಧ್ಯವಾಗದಿದ್ದರೆ ಈ(ಮೋ. 9731578106) ನಂಬರಿಗೆ ಶಾಲೆಯ ಬಿಡುವಿನ ವೇಳೆಯಲ್ಲಿ ಕರೆ ಮಾಡಬಹುದು.

                                                                                                            - ರಾಜು ರುದ್ರಗೌಡರ ಸ.ಶಿ.

                                                                                                ಕೆ.ಎಚ್.ಪಿ.ಎಸ್. ಕೋಥಳಿ, ತಾ. ಚಿಕ್ಕೋಡಿ

                                                                                                          ಜಿ: ಬೆಳಗಾವಿ ಮೋ.9731578106

1 comment:

  1. we want table mettilu miligallu chatuvatike for ganitha and parisara vignana
    thanks in advance
    rama

    ReplyDelete

About Me